ಪೋಸ್ಟ್‌ಗಳು

ಆಗಸ್ಟ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದಅವಾ ಕಾನ್ಫರೆನ್ಸ್ ಸಮಾಪ್ತಿ

ಇಮೇಜ್
 ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದಅವಾ ಕಾನ್ಫರೆನ್ಸ್  ಕಾರ್ಕಳ - ಆ.31 :  ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದಅವಾ ಕಾನ್ಫರೆನ್ಸ್ ಆಗಸ್ಟ್ 31 ರಂದು ಬುಧವಾರ  ತ್ವೆಬ ಗಾರ್ಡನ್ ಬಂಗ್ಲಗುಡ್ಡೆಯಲ್ಲಿ ಜಿಲ್ಲಾ ದಅವಾ ಕಾರ್ಯದರ್ಶಿ ಶಾಹುಲ್ ಹಮೀದ್ ನಈಮಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೈಯದ್ ಜವಾದ್ ತಂಙಳ್ ದುಆದೊಂದಿಗೆ ಚಾಲನೆ ನೀಡಿದರು.  ಸಯ್ಯದ್ ಫಝಲ್ ಜಿಫ್ರಿ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಸಂಪನ್ಮೂಲ ವ್ಯಕ್ತಿಗಳಾಗಿ ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಝೈನುಲ್ ಆಬಿದ್ ಸಖಾಫಿ ಮಾಗುಂಡಿ, ತ್ವೈಬಾ ಗಾರ್ಡನ್ ಬಂಗ್ಲಗುಡ್ಡೆ ಇದರ ಎಜ್ಯುಕೇಶನ್ ಡೈರಕ್ಟರ್ ಇಸ್ಮಾಯಿಲ್ ಸರ್ ಮಂಚಿ, ಉತ್ತಮ ತರಬೇತಿಯನ್ನು ನೀಡಿದರು. ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಬಂಗ್ಲಗುಡ್ಡೆ, ಮಾದ್ಯಮ ಕಾರ್ಯದರ್ಶಿ ಮುಹಮ್ಮದ್ ಸಮೀರ್ ಕೋಡಿ, ಕ್ಯೂಡಿ ಕಾರ್ಯದರ್ಶಿ ನವಾಝ್ ಕಾರ್ಕಳ, ಎಸ್ಸೆಸ್ಸೆಫ್ ಕಾರ್ಕಳ ಡಿವಿಷನ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಅಂಜದಿ ಕಂಪಾನ್ ಉಪಸ್ಥಿತಿಯಿದ್ದರು. ಕಾರ್ಯಕ್ರಮದಲ್ಲಿ ಕನ್ನಂಗಾರ್, ಮೂಳೂರ್, ಹಂಗಳೂರು,  ಬಂಗ್ಲಗುಡ್ಡೆ ಸೇರಿದಂತೆ ನೂರಕ್ಕೂ ಮಿಕ್ಕ ದಅವಾ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ಪಬ್ಲಿಕೇಷನ್ ಕಾರ್ಯದರ್ಶಿ ಅನೀಸ್ ಸರ್ಹಿಂದಿ ಅಲ್ ಫಾಳಿಲಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. Joine our WhatsApp group  https://...

ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಕ್ಯಾಂಪಸ್ ಅಸೆಂಬ್ಲಿ

ಇಮೇಜ್
 ಉಡುಪಿ ಜಿಲ್ಲಾ ಕ್ಯಾಂಪಸ್ ಅಸೆಂಬ್ಲಿ ಕಾಪು ಆ.3: ಪ್ರಚಲಿತ ವಿಧ್ಯಾಮಾನಗಳು ವಿಧ್ಯಾರ್ಥಿಗಳನ್ನು ಅರಾಜಕತೆಯೆಡೆಗೆ ತಲುಪಿಸುತ್ತಿರುವಾಗ, ಅವರಿಗೆ ಶಿಕ್ಷಣದ ಮಹತ್ವವನ್ನು ಕಲ್ಪಿಸಿ, ಧಾರ್ಮಿಕ ಶಿಷ್ಟಾಚಾರಗಳೊಂದಿಗೆ ವಿದ್ಯಾರ್ಥಿ ಜೀವನದ ಗುರಿ, ಉದ್ಧೇಶಗಳ ಈಡೇರಿಕೆಯ ಮನವರಿಕೆಗಾಗಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಹಮ್ಮಿಕೊಂಡ 'ನೈತಿಕತೆ, ಸಮಗ್ರತೆ, ಸಮರ್ಪಣೆ' ಎಂಬ ಧ್ಯೇಯವಾಕ್ಯದೊಂದಿಗೆ ಕ್ಯಾಂಪಸ್ ಅಸೆಂಬ್ಲಿ ಉಡುಪಿ ಜಿಲ್ಲಾ ಸಮಿತಿಯ ಕಾರ್ಯಕ್ರಮವು ಜುಲೈ 31ರಂದು ಕಾಪುವಿನ ಪಕೀರ್ಣಕಟ್ಟೆಯಲ್ಲಿರುವ ಪ್ಯಾಲೇಸ್ ಗಾರ್ಡನ್ ರೆಸಾರ್ಟ್ ನಲ್ಲಿ ನಡೆಯಿತು. ಉಡುಪಿ ಜಿಲ್ಲಾಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿ ವಹಿಸಿದ್ದರು.  ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದ‌ಅವಾ ಕನ್ವೀನರ್ ಸಿದ್ದೀಕ್ ಸಖಾಫಿ ಹಂಗಳೂರು ದುಆದೊಂದಿಗೆ ಚಾಲನೆ ನೀಡಿದರು. ಎಸ್ ವೈ ಎಸ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ರುರ್ರಹ್ಮಾನ್ ರಝ್ವಿ ಕಲ್ಕಟ್ಟ ಅಸೆಂಬ್ಲಿಯನ್ನು ಉದ್ಘಾಟಿಸಿದರು.  ನಂತರ ವಿಶ್ವ ವಿಖ್ಯಾತ ಮರ್ಕಝುಸ್ಸಖಾಫತಿಸುನ್ನಿಯ್ಯ  ಕಾರಂದೂರು ಇದರ  ವೈಸ್ ಚಾನ್ಸೆಲ್ಲರ್ ಡಾ.ಹುಸೈನ್ ಸಖಾಫಿ ಚುಲ್ಲಿಕ್ಕೋಡ್, ಹಂಝ ಮದನಿ ಮಿತ್ತೂರು, ಎಸ್ ವೈ ಎಸ್ ರಾಜ್ಯಾಧ್ಯಕ್ಷರಾಗಿರುವ ಡಾ. ಅಬ್ದುರ್ರಶೀದ್ ಝೈನಿ ಅಲ್ ಖಾಮಿಲ್ ಸಖಾಫಿ, ಇಲೆಕ್ಟ್ರಿಕ್  ಪೆ ಇದರ ಪ್ರೋಗ್ರಾಮ್  ಮ್ಯಾನೇಜರಾಗಿರುವ ಶಾಹಿಬ್ಝಾದಾ ಯಾಮಿನ್ ಯಾಕೂಬ್ ಬೆಂಗಳೂರು, ಎಸ್ಸೆ...