ಸಾಮರಸ್ಯ ನಡಿಗೆ, ಸಹಬಾಳ್ವೆ ಸಮಾವೇಶ ಯಶಸ್ವಿಗೆ ಕರೆ
ಇಂದು ಉಡುಪಿಯಲ್ಲಿ ನಡೆಯುವ "ಸಾಮರಸ್ಯ ನಡಿಗೆ" ಸಹಬಾಳ್ವೆ ಸಮಾವೇಶ ಯಶಸ್ವಿಗೊಳಿಸಲು ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿ ಕರೆ
ಉಡುಪಿಯ 'ಸಾಮರಸ್ಯ ನಡಿಗೆ' *ಸಹಬಾಳ್ವೆ ಸಮಾವೇಶ* ಕ್ಕೆ ವೇದಿಕೆ ಸಜ್ಜಾಗಿದೆ. ಸಹಪಂಕ್ತಿ ಭೋಜನವನ್ನು ಇನ್ನೂ ಮೈಗೂಡಿಸಿಕೊಳ್ಳದ, ದೇಶದ ದ್ವೇಶ ರಾಜಕೀಯದಲ್ಲಿ , ರಾಜ್ಯದಲ್ಲಿ ಕೋಮು ವಿಷಮತೆಯ ಪ್ರಯೋಗಶಾಲೆಯಾಗಿರುವ ನೆಲದಿಂದ ಇಂತಹ ಸೌಹಾರ್ದತೆ ಸಾರುವ ಸಮಾವೇಶ ಈಗ ಮತ್ತೊಮ್ಮೆ ಚಾಲನೆ ಪಡೆದುಕೊಳ್ಳುತ್ತಿದೆ.
ಈಗಿನ ಬಹುಸಂಖ್ಯಾತವಾದದಲ್ಲಿ ಮೂಲೆಗುಂಪಾಗುವ-ದೌರ್ಜನ್ಯಕ್ಕೆ ಒಳಗಾಗುವ ಅಪಾಯ ಎದುರಿಸುತ್ತಿರುವ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಮತಧರ್ಮಗಳ ಕೆಲವು ವರ್ಗಗಳಲ್ಲಿ ಕೂಡ ಅವರವರ ಮತಧರ್ಮದ ಶ್ರೇಷ್ಠತೆಯನ್ನು ಮಾತ್ರ ಪ್ರತಿಪಾದಿಸುವ ವ್ಯಕ್ತಿಗಳು-ಗುಂಪುಗಳು ಇಲ್ಲವೆಂದಲ್ಲ. ಆದರೆ, ಸಮಾನತೆಯ ತಳಹದಿಯಲ್ಲಿ ಹೊಂದಾಣಿಕೆ-ಕೂಡುಬಾಳ್ವೆಯೆಡೆಗೆ ಇಲ್ಲಿಯವರೆಗೂ ಸಾಧಿಸಲು ಸಾಧ್ಯವಾಗಿದ್ದ ಚಲನೆಯನ್ನು ಇಂದು ನೆಲೆಸಿರುವ ದ್ವೇಷದ ರಾಜಕೀಯ ವಾತಾವರಣ ಮಣ್ಣುಮುಕ್ಕಿಸಿ, ಅಲ್ಪಸಂಖ್ಯಾತರನ್ನು ಅನ್ಯರನ್ನಾಗಿಸಿ ಎರಡನೇ ದರ್ಜೆಯ ನಾಗರಿಕರನ್ನಾಗಿಸಲು ಹೊರಟಿರುವಾಗ, ಈ ಸಾಮರಸ್ಯ-ಸಹಬಾಳ್ವೆಯ ಪರಿಕಲ್ಪನೆಗಳಿಗೆ ಸಂದರ್ಭಾನುಸಾರ ವಿಶಾಲ ಅರ್ಥಗಳು ದೊರಕುವುದು ಸಹಜ.
ಸದರಿ ಸಮಾವೇಶ ಸಮಾನತೆಯನ್ನು ಪ್ರತಿಪಾದಿಸುವ, ಜಾತಿ-ಧರ್ಮ ಪ್ರೇರಿತ ತಾರತಮ್ಯವನ್ನು ಹೋಗಲಾಡಿಸುವ ಇರಾದೆ ಹೊಂದಿರುವ ಸಂವಿಧಾನವನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ.
(ಮೇ 14) ಇಂದು ಮಧ್ಯಾಹ್ನ 2 ಗಂಟೆಗೆ ಅಜ್ಜರಕಾಡು ನಿಂದ ಸಾಮರಸ್ಯ ನಡಿಗೆ ಹಾಗೂ
ಸಹಬಾಳ್ವೆ ಸಮಾವೇಶ ಸಂಜೆ 4.00 ಗಂಟೆಗೆ ಉಡುಪಿಯ ಮಿಶನ್ ಕಂಪೌಂಡ್ ನ ಕ್ರಿಶ್ಚಿಯನ್ ಶಾಲೆ ಮೈದಾನದಲ್ಲಿ ನಡೆಯಲಿದೆ. ಎಲ್ಲಾ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ